ಕೊಡಿಗೆ: ಪ್ರಜಾವಾಣಿ - ಕೃಷಿ ಪುರವಣಿ:
ಚಿತ್ರದಲ್ಲಿ ಕಾಣುವ ಸಸ್ಯದ ಹೆಸರು ಮಧುನಾಶಿನಿ. ಇದರ ಎಲೆಗಳು ಸಕ್ಕರೆ ಕಾಯಿಲೆಗೆ ಅತ್ಯುತ್ತಮ ಔಷಧ ಎಂಬ ಅಭಿಪ್ರಾಯವಿದೆ. ಗ್ರಾಮೀಣ ಪ್ರದೇಶದ ಸಕ್ಕರೆ ರೋಗಿಗಳು ಮಧುನಾಶಿನಿ ಸಸ್ಯದ ಎಲೆಗಳನ್ನು ನಿತ್ಯ ತಿನ್ನುತ್ತಾರೆ. ಇದರ ಎಲೆಗಳು ರುಚಿಯಲ್ಲಿ ಹುಳಿಯಾಗಿವೆ. ಗಿಡ ಸುಮಾರು ಐದು ಅಡಿ ಎತ್ತರ ಬೆಳೆಯುತ್ತದೆ.ಸಕ್ಕರೆ ರೋಗಿಗಳು ಮಧುನಾಶಿನಿ ಎಲೆಗಳಿಂದ ಕಷಾಯ ಮಾಡಿ ಕುಡಿಯುತ್ತಾರೆ. ಗಿಡದ ದಂಟು ಮತ್ತು ಎಲೆಗಳನ್ನು ಹಸಿಯಾಗಿಯೇ ತಿನ್ನಬಹುದು. ಗಿಡದ ದಂಟುಗಳನ್ನು ನಾಟಿ ಮಾಡಿ ಹೊಸ ಗಿಡ ಬೆಳೆಸಿಕೊಳ್ಳಬಹುದು. ಗಿಡ ಎತ್ತರವಾದರೆ ಅದು ನೆಲಕ್ಕೆ ಬಾಗುತ್ತದೆ. ಅದಕ್ಕೆ ಆಸರೆ ಕೊಟ್ಟು ನಿಲ್ಲಿಸಬೇಕು.ಮಧುನಾಶಿನಿ ಗಿಡಗಳಿಗೆ ವಿಶೇಷ ಆರೈಕೆ ಬೇಕಿಲ್ಲ. ಇದಕ್ಕೆ ಯಾವುದೇ ರೋಗ ಬಾಧೆ ಇಲ್ಲ. ಬೇಸಿಗೆಯಲ್ಲಿ ಸ್ವಲ್ಪ ನೀರು ಹಾಕಿದರೆ ಸಾಕು. ಮಲೆನಾಡಿನ ಮನೆಗಳ ಹಿತ್ತಲಲ್ಲಿ ಮಧುನಾಶಿನಿ ಗಿಡ ಇರುತ್ತದೆ. ಹಿತ್ತಲು ಇಲ್ಲದವರು ಈ ಸಸ್ಯವನ್ನು ಕುಂಡದಲ್ಲಿ ಅಥವಾ ಸಿಮೆಂಟ್ ಚೀಲದಲ್ಲಿ ಮಣ್ಣು ಹಾಕಿ ಬೆಳೆಸಿಕೊಳ್ಳಲು ಸಾಧ್ಯವಿದೆ. ಇದನ್ನು ಅಲಂಕಾರಿಕ ಗಿಡದಂತೆಯೂ ಬೆಳೆಸಬಹುದು. ಈ ಸಸ್ಯವನ್ನು ಕೆಲವರು `ಇನ್‌ಸುಲಿನ್` ಗಿಡ ಎಂದೂ ಕರೆಯುತ್ತಾರೆ. ಈ ಗಿಡದ ಎಲೆಗಳಿಗೆ ಸಕ್ಕರೆ ರೋಗ ನಿಯಂತ್ರಿಸುವ ಶಕ್ತಿ ಇದೆ ಎಂಬುದು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ.

No comments:
Post a Comment