ಅಂಗಳದಲ್ಲಿ ಪಪ್ಪಾಯಿ
ಕೊಡಿಗೆ: ಪ್ರಜಾವಾಣಿ - ಕೃಷಿ ಪುರವಣಿ:
ಕರ್ನಾಟಕದ ಅನೇಕ ಜಿಲ್ಲೆಗಳ ರೈತರು ದೊಡ್ಡ ಪ್ರಮಾಣದಲ್ಲಿ ಪಪ್ಪಾಯಿ ಬೆಳೆದು ಯಶಸ್ವಿಯಾಗಿದ್ದಾರೆ. ಮನೆಯ ಅಂಗಳ ಅಥವಾ ಹಿತ್ತಲಲ್ಲಿ ಸ್ವಲ್ಪ ಜಾಗ ಇದ್ದವರೂ ಪಪ್ಪಾಯಿ ಬೆಳೆದು ಸ್ವಲ್ಪ ಹಣ ಗಳಿಸಲು ಸಾಧ್ಯವಿದೆ. ಸುಳ್ಯ ತಾಲ್ಲೂಕಿನ ಕಲ್ಲುಗುಂಡಿ ಗ್ರಾಮದ ಸುಳ್ಯಕೋಡಿ ಡಿ.ಆರ್. ನಾರಾಯಣರಾವ್ ತಮ್ಮ ಮನೆಯಂಗಳದಲ್ಲೇ ಮೂವತ್ತು ಪಪ್ಪಾಯಿ ಮರಗಳನ್ನು ಬೆಳೆಸಿ ಸಣ್ಣ ಮೊತ್ತದ ಆದಾಯ ಪಡೆಯುತ್ತಿದ್ದಾರೆ.
ನಾರಾಯಣರಾವ್ ರಬ್ಬರ್ ಬೆಳೆಗಾರರು. ಅವರ ಮನೆಯ ಅಂಗಳದ ಖಾಲಿ ಜಾಗದಲ್ಲಿ ಒಂದೆರಡು ಪಪ್ಪಾಯಿ ಗಿಡಗಳನ್ನು ಬೆಳೆಸಿದರೆ ಮಾರುಕಟ್ಟೆಯಿಂದ ಹಣ ಕೊಟ್ಟು ಹಣ್ಣು ಖರೀದಿಸುವುದು ತಪ್ಪುತ್ತದೆ ಅನ್ನಿಸಿತು. ನರ್ಸರಿಯೊಂದರಿಂದ ತೈವಾನ್ ರೆಡ್‌ಲೇಡಿ ತಳಿಯ ಮೂವತ್ತು ಸಸಿಗಳನ್ನು ಒಂದಕ್ಕೆ 15 ರೂ ನಂತೆ ಖರೀದಿಸಿದರು. ಮನೆಯ ಅಂಗಳದ 5 ಸೆಂಟ್ಸ್ ಜಾಗದಲ್ಲಿ ಒಂದೂವರೆ ಅಡಿ ಉದ್ದ, ಅಗಲ, ಆಳದ ಗುಂಡಿಗಳನ್ನು 7್ಡ7 ಅಡಿ ಅಂತರದಲ್ಲಿ ತೆಗೆದು ಸಸಿ ನಾಟಿ ಮಾಡಿದರು. ಪ್ರತಿ ಗಿಡಕ್ಕೆ ಆಡಿನ ಗೊಬ್ಬರ, ಬೇವಿನ ಹಿಂಡಿಗಳನ್ನು ಮಿಶ್ರ ಮಾಡಿ ಹಾಕಿದರು. ಕಳೆದ ಅಕ್ಟೋಬರ್‌ನಲ್ಲಿ ನಾಟಿ ಮಾಡಿದ ಗಿಡಗಳು ಈಗ ಫಸಲು ಕೊಡುತ್ತಿವೆ.
ಮನೆಯಲ್ಲಿ ಪಾತ್ರೆಗಳನ್ನು ತೊಳೆದ ನೀರನ್ನು ಒಂದೆಡೆ ಸಂಗ್ರಹಿಸಿ ಪಪ್ಪಾಯಿ ಗಿಡಗಳಿಗೆ ಹಾಕುತ್ತಾರೆ. ಗಿಡಗಳು ಹುಲುಸಾಗಿ ಬೆಳೆದಿವೆ. ಮಳೆಗಾಲದಲ್ಲಿ ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಂಡಿದ್ದಾರೆ. ಅವರು ರಾಸಾಯನಿಕ ಗೊಬ್ಬರ ಹಾಕಿಲ್ಲ.
ತಿಂಗಳಿಗೊಮ್ಮೆ ಶೇಂಗಾ ಹಿಂಡಿ, ಸೆಗಣಿಯ ಮಿಶ್ರಣ ಕೊಳೆಸಿ ಗಿಡಗಳಿಗೆ ಹಾಕುತ್ತಾರೆ. ಹೀಗಾಗಿ ಅವರ ಮನೆಯಂಗಳದಲ್ಲಿ ಬೆಳೆದ ಪಪ್ಪಾಯಿ ಹಣ್ಣುಗಳಿಗೆ ವಿಶಿಷ್ಟ ರುಚಿ ಇದೆ. ಪಪ್ಪಾಯಿ ಗಿಡಗಳು ಮೂರು ವರ್ಷದವರೆಗೆ ಇಳುವರಿ ಕೊಡುತ್ತವೆ. ಒಂದು ಗಿಡದಿಂದ ವಾರಕ್ಕೆ ಸರಾಸರಿ 3 ರಿಂದ 4 ಕೇಜಿ ಹಣ್ಣು ಕೊಯ್ಯಬಹುದು. ರಾವ್ ಅವರು ಒಂದು ಗಿಡಕ್ಕೆ 50 ರೂ.ವಿನಂತೆ ಮೂವತ್ತು ಗಿಡಕ್ಕೆ 1500 ರೂ. ಖರ್ಚು ಮಾಡಿದ್ದಾರೆ. ಈಗ ಒಂದು ಗಿಡದಿಂದ ಅವರಿಗೆ ವರ್ಷಕ್ಕೆ 500 ರೂ ನಂತೆ 15,000 ರೂ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಮಾವು, ಬಾಳೆಗಳಂತೆ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಬೆಳೆದರೆ ರೈತರಿಗೆ ಲಾಭ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚುಲಾಭದಾಯಕ. 5 ಕೆಜಿಯಿಂದ 50 ಕೆಜಿಗಳವರೆಗೆ ತೂಗುವ ಇದು ಗಾತ್ರದಲ್ಲಿ ಹಣ್ಣುಗಳ ದೊಡ್ಡಣ್ಣನೇ ಸರಿ. ಆರ್ಥಿಕ ದೃಷ್ಟಿಯಿಂದಲೂ ಇದು ಕುಟುಂಬದ ಖರ್ಚು ವೆಚ್ಚಗಳಿಗೆ ದಾರಿಯಾಗಬಲ್ಲದು. ಹಲಸು ಮೇಳಗಳಲ್ಲಿ ತೂಬಗೆರೆ ಪ್ರಾಂತ್ಯದ ಹಲಸಿನ ಹಣ್ಣುಗಳನ್ನು150 ರಿಂದ 300 ರೂ.ವರೆಗೆ ಬೆಲೆ ಇದೆ. ಬಿಡಿ ತೊಳೆಗಳನ್ನು ಮಾರಾಟ ಮಾಡಿ ಒಂದು ಕಾಯಿಗೆ 650ರೂ. ಗಳಿಸಿದ ನಿದರ್ಶನಗಳೂ ಇವೆ. ಒಂದು ಮರದಲ್ಲಿ ಸರಾಸರಿ ಎಂದರೂ 150 ಹಣ್ಣು ಗ್ಯಾರಂಟಿ. ಒಂದು ಹಣ್ಣಿನಲ್ಲಿ 70ರಿಂದ 250 ತೊಳೆಗಳಿರುತ್ತವೆ. ಒಂದು ತೊಳೆಗೆ ಎರಡು ರೂ. ಎಂದರೂ ಲಾಭವೋ ಲಾಭ.
ನಾರಾಯಣರಾವ್ ರಬ್ಬರ್ ಬೆಳೆಗಾರರು. ಅವರ ಮನೆಯ ಅಂಗಳದ ಖಾಲಿ ಜಾಗದಲ್ಲಿ ಒಂದೆರಡು ಪಪ್ಪಾಯಿ ಗಿಡಗಳನ್ನು ಬೆಳೆಸಿದರೆ ಮಾರುಕಟ್ಟೆಯಿಂದ ಹಣ ಕೊಟ್ಟು ಹಣ್ಣು ಖರೀದಿಸುವುದು ತಪ್ಪುತ್ತದೆ ಅನ್ನಿಸಿತು. ನರ್ಸರಿಯೊಂದರಿಂದ ತೈವಾನ್ ರೆಡ್‌ಲೇಡಿ ತಳಿಯ ಮೂವತ್ತು ಸಸಿಗಳನ್ನು ಒಂದಕ್ಕೆ 15 ರೂ ನಂತೆ ಖರೀದಿಸಿದರು. ಮನೆಯ ಅಂಗಳದ 5 ಸೆಂಟ್ಸ್ ಜಾಗದಲ್ಲಿ ಒಂದೂವರೆ ಅಡಿ ಉದ್ದ, ಅಗಲ, ಆಳದ ಗುಂಡಿಗಳನ್ನು 7್ಡ7 ಅಡಿ ಅಂತರದಲ್ಲಿ ತೆಗೆದು ಸಸಿ ನಾಟಿ ಮಾಡಿದರು. ಪ್ರತಿ ಗಿಡಕ್ಕೆ ಆಡಿನ ಗೊಬ್ಬರ, ಬೇವಿನ ಹಿಂಡಿಗಳನ್ನು ಮಿಶ್ರ ಮಾಡಿ ಹಾಕಿದರು. ಕಳೆದ ಅಕ್ಟೋಬರ್‌ನಲ್ಲಿ ನಾಟಿ ಮಾಡಿದ ಗಿಡಗಳು ಈಗ ಫಸಲು ಕೊಡುತ್ತಿವೆ.
ಮನೆಯಲ್ಲಿ ಪಾತ್ರೆಗಳನ್ನು ತೊಳೆದ ನೀರನ್ನು ಒಂದೆಡೆ ಸಂಗ್ರಹಿಸಿ ಪಪ್ಪಾಯಿ ಗಿಡಗಳಿಗೆ ಹಾಕುತ್ತಾರೆ. ಗಿಡಗಳು ಹುಲುಸಾಗಿ ಬೆಳೆದಿವೆ. ಮಳೆಗಾಲದಲ್ಲಿ ಗಿಡಗಳ ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಂಡಿದ್ದಾರೆ. ಅವರು ರಾಸಾಯನಿಕ ಗೊಬ್ಬರ ಹಾಕಿಲ್ಲ.
ತಿಂಗಳಿಗೊಮ್ಮೆ ಶೇಂಗಾ ಹಿಂಡಿ, ಸೆಗಣಿಯ ಮಿಶ್ರಣ ಕೊಳೆಸಿ ಗಿಡಗಳಿಗೆ ಹಾಕುತ್ತಾರೆ. ಹೀಗಾಗಿ ಅವರ ಮನೆಯಂಗಳದಲ್ಲಿ ಬೆಳೆದ ಪಪ್ಪಾಯಿ ಹಣ್ಣುಗಳಿಗೆ ವಿಶಿಷ್ಟ ರುಚಿ ಇದೆ. ಪಪ್ಪಾಯಿ ಗಿಡಗಳು ಮೂರು ವರ್ಷದವರೆಗೆ ಇಳುವರಿ ಕೊಡುತ್ತವೆ. ಒಂದು ಗಿಡದಿಂದ ವಾರಕ್ಕೆ ಸರಾಸರಿ 3 ರಿಂದ 4 ಕೇಜಿ ಹಣ್ಣು ಕೊಯ್ಯಬಹುದು. ರಾವ್ ಅವರು ಒಂದು ಗಿಡಕ್ಕೆ 50 ರೂ.ವಿನಂತೆ ಮೂವತ್ತು ಗಿಡಕ್ಕೆ 1500 ರೂ. ಖರ್ಚು ಮಾಡಿದ್ದಾರೆ. ಈಗ ಒಂದು ಗಿಡದಿಂದ ಅವರಿಗೆ ವರ್ಷಕ್ಕೆ 500 ರೂ ನಂತೆ 15,000 ರೂ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಹಲಸು ಕೃಷಿ
ಕೊಡಿಗೆ: ಉದಯವಾಣಿ - ಕೃಷಿ ಪುರವಣಿ:
ಹಸಿದು ಹಸಲು ತಿನ್ನು, ಉಂಡು ಮಾವು ತಿನ್ನು ಎಂಬ ಮಾತಿನಂತೆ ಹಸಿವನ್ನು ನೀಗಿಸುವ ಸಾಮರ್ಥ್ಯ ಹಲಸಿನ ಹಣ್ಣಿಗಿದೆ. ಹಲಸು ಬಡವರ ಹಣ್ಣು ಎಂದೇ ಜನಜನಿತವಾಗಿದೆ.
ಕಸಿ ಮಾಡಿದ ಸಸಿಗಳಿಗೆ ಬೇಡಿಕೆ ಜಾಸ್ತಿ. ಮೇಳಗಳಲ್ಲಿ ಹಲಸಿನ ಸಸಿಗಳನ್ನು ಮಾರಾಟ ಮಾಡಿ ರಾಜ್ಯದ ವಿವಿದೆಡೆ ತೂಬಗೆರೆ ಹಲಸಿನ ವೈಶಿಷ್ಟ್ಯತೆಯನ್ನು ಪರಿಚಯಿಸಲಾಗಿದೆ. ಹಲಸು ಹೆಚ್ಚು ಮಳೆಯಾಗುವ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳಲ್ಲಾದರೂ ಸರಿಯೇ, ಒಣ ಪ್ರದೇಶದಲ್ಲಾದರೂ ಸರಿಯೇ, ಬೆಳೆಯುತ್ತದೆ. ಆದರೆ ರುಚಿಯಲ್ಲಿ ಅಧಿಕ ಮಳೆಯಾಗುವ ಹಾಗೂ ಎತ್ತರದ ಪ್ರದೇಶದ ಹಣ್ಣುಗಳು ಸಪ್ಪೆ. ಒಣ ಮೈದಾನಗಳಲ್ಲಿನ ಹಣ್ಣುಗಳು ಸಿಹಿಯಿರುತ್ತವೆ. ಒಂದು ಮರ ಬೆಳೆದು ಚೊಚ್ಚಲ ಫಸಲು ನೀಡಲು 6-7 ವರ್ಷ ಬೇಕು.
ಹಲಸು ಸಾವಯವ ಕೃಷಿಗೆ ಉತ್ತಮ ಉದಾಹರಣೆ. ಕಸಿ ಮಾಡಿದ ಸಸಿಯನ್ನು ನಾಟಿ ಮಾಡುವ ಸಮಯದಲ್ಲಿ ಚೆನ್ನಾಗಿ ಉಳುಮೆ ಮಾಡಿ ಸಿದಟಛಿಪಡಿಸಿರುವ ಭೂಮಿಯಲ್ಲಿಒಂದು ಘನ ಮೀಟರ್ ಅಳತೆಯ ಗುಣಿಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರವನ್ನು ಸಮಾನ ಪ್ರಮಾಣದಲ್ಲಿ ಬೆರಸಿ ನಾಟಿ ಮಾಡಬೇಕು. ಇದಕ್ಕೆ ಕೋಲಿನ ಆಸರೆ ಬೇಕೇ ಬೇಕು.
ಮರಗಳು ಬೃಹದಾಕಾರವಾಗಿ ಬೆಳೆಯುವುದರಿಂದ ಕನಿಷ್ಠ 40 ಅಡಿ ಅಂತರವಿದ್ದರೆ ಒಳಿತು. ನಾಟಿ ಮಾಡುವುದಕ್ಕೆ ಏಪ್ರಿಲ್-ಜೂನ್ ತಿಂಗಳು ಸೂಕ್ತ. ಆರಂಭದಲ್ಲಿ ಒಳ್ಳೆ ಆರೈಕೆ ಮಾಡಿದರೆ ಸಾಕು ಒಣ ಭೂಮಿಯಲ್ಲಿಯೂ ಬುಡದಿಂದ ತಲೆಯವರೆಗೆ ಕಾಯಿಗಳು ಬಿಡುತ್ತವೆ. ಸಾಧಾರಣವಾಗಿ ಕನಿಷ್ಠ 50 ಹಣ್ಣುಗಳಿಂದ 250 ಹಾಗೂ ಕೆಲವು ಅಪರೂಪದಮರಗಳು 500 ಹಣ್ಣುಗಳು ನೀಡುತ್ತವೆ. ಎಳೆ ಕಾಯಿಗಳು ಪೌಷ್ಟಿಕ ತರಕಾರಿಯಾದರೆಪಕ್ವಗೊಂಡ ಹಣ್ಣಿನ ತೊಳೆಗಳು ತಿನ್ನಲು ಉಪಯುಕ್ತ. ಇದರೊಂದಿಗೆ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ಸಹ ತಯಾರಿಸಬಹುದು. ಹಲಸಿನ ಯಾವ ಭಾಗವೂ ನಿರುಪಯೋಗವಲ್ಲ. ಒಂದು ವೇಳೆ ಹಣ್ಣು ಬಿಡದಿದ್ದರೂ ಹಲಸಿನ ಸೊಪ್ಪು$ ಹಾಕಿ ಐದಾರು ಆಡುಗಳನ್ನು ಬೆಳೆಸಿದರೆ ಸಾವಿರಾರು ರೂ. ಗಳಿಸಬಹುದು.
ಅಂದ ಹಾಗೆ ಭಾರತ ಹಲಸಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ. ಅದರಲ್ಲಿ ದೊಡ್ಡಬಳ್ಳಾಪುರದತೂಬಗೆರೆ ಹೋಬಳಿಗಂತೂ ವಿಶಿಷ್ಟ ಸ್ಥಾನ.